
Monday, October 7, 2013
ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ಗೂಗಲ್‌ನ ಅತ್ಯಾಧುನಿಕ ಡೇಟಾ ಸೆಂಟರ್‌ಗಳು
ವಿಶ್ವದ ನಂಬರ್ ಒನ್ ಸರ್ಚ್ ಇಂಜಿನ್ ಗೂಗಲ್ ತನ್ನ ಬಳಕೆದಾರರ ಮಾಹಿತಿಯನ್ನು
ರಕ್ಷಿಸಲು ವಿಶ್ವದ 13 ವಿವಿಧ ಸ್ಥಳಗಲ್ಲಿ ಡೇಟಾ ಕೇಂದ್ರವನ್ನು ತೆರೆದಿದೆ. ಅದರಲ್ಲೂ
ಅಮೆರಿಕದ ಏಳು ಸ್ಥಳಗಳಲ್ಲಿ, ಏಷ್ಯಾದ ಮೂರು ದೇಶದಲ್ಲಿ, ಯೂರೋಪ್‌ನ ಮೂರು ದೇಶಗಳಲ್ಲಿ
ತನ್ನ ಡಾಟಾ ಕೇಂದ್ರವನ್ನು ತೆರೆದಿದೆ.
ಈ ಡೇಟಾ ಕೇಂದ್ರಗಳು ದಿನದ 24 ಗಂಟೆ,ವಾರದ ಏಳು ದಿನವು ಸಹ ನಿರಂತರವಾಗಿ ಕೆಲಸ
ಮಾಡುತ್ತಿರುತ್ತದೆ.ಇನ್ನೂ ಈ ಡೇಟಾ ಸೆಂಟರ್ ಕೂಲಾಗಿ ಸುರಕ್ಷಿತವಾಗಿ ಕೆಲಸ ಮಾಡಲು
ಮೇಲುಗಡೆಯಿಂದ ನೀರನ್ನು ಚಿಮ್ಮಿಸಲಾಗುತ್ತದೆ.ಇನ್ನೂ ಡೇಟಾ ಸೆಂಟರ್ ಒಳಗಡೆ ಪೈಪ್‌ನ
ಮೂಲಕ ನೀರನ್ನು ಹಾಯಿಸಲಾಗುತ್ತದೆ ನೀಲಿ ಬಣ್ಣದ ಪೈಪ್‌ನಲ್ಲಿ ತಂಪಾದ ನೀರು ಹರಿಸಿದ್ದರೆ
ಕೆಂಪು ಬಣ್ಣದ ನೀರಿನಲ್ಲಿ ಡೇಟಾ ಸೆಂಟರ್ ಬಿಸಿಯಾದ ನೀರು ಬರುವಂತೆ ವ್ಯವಸ್ಥೆ
ಮಾಡಲಾಗಿದೆ. ಈ ಬಿಸಿ ನೀರು ಪುನ: ತಂಪಾಗಿಸಲು ಅದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ.ಇನ್ನೂ
ಈ ನೀರನ್ನು ಸಂಗ್ರಹಿಸಲು ದೊಡ್ಡ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದ್ದು, ಒಂದು ನೀರಿನ
ಟ್ಯಾಂಕ್ 9 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನೂ ಡೇಟಾ ಸೆಂಟರ್ ರೂಮಿನೊಳಗಡೆ ಚಲಿಸಲು ಒಂದು ಜಿ ಬೈಕ್ ಹೆಸರಿನ ಸೈಕಲ್
ಇಡಲಾಗಿದೆ. ಡೇಟಾ ಸೆಂಟರ್‌ನಲ್ಲಿ ಏನಾದರೂ ಸಮಸ್ಯೆ ಸೃಷ್ಟಿಯಾದಲ್ಲಿ ಈ ಸೈಕಲ್‌ನಲ್ಲಿ
ಸಿಬ್ಬಂದಿಗಳು ಆ ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತಾರೆ.ಈ ರೀತಿ ಇದು ಕೆಲಸ
ಮಾಡುತ್ತಿರುವುದರಿಂದಲೇ ಗೂಗಲ್ ಇಂದು ವಿಶ್ವದ ದೊಡ್ಡ ಇಂಟರ್‌ನೆಟ್ ಸಂಸ್ಥೆಯಾಗಿ
ಬೆಳೆದಿದೆ.
ಇಂತಹ ದೊಡ್ಡ ಸಂಸ್ಥೆಯ ಡೇಟಾ ಸೆಂಟರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯುವ
ಕುತೂಹಲ ನಿಮಗಿದೆ ತಾನೆ? ನಿಮ್ಮ ಕುತೂಹಲ ತಣಿಸುವುದಕ್ಕಾಗಿಯೇ ಗಿಝ್‌ಬಾಟ್ ನಿಮಗಾಗಿಯೆ ಆ
ಕೊಠಡಿಗಳಿರುವ ಚಿತ್ರ ತಂದಿದೆ.ಒಂದೊಂದೆ ಪುಟ ತಿರುವಿ ಸುಂದರ ಕೊಠಡಿಗಳನ್ನು ನೋಡಿಕೊಂಡು
ಹೋಗಿ.
Read more at: http://kannada.gizbot.com/news/inside-google-s-data-center-004936.html
Read more at: http://kannada.gizbot.com/news/inside-google-s-data-center-004936.html
Subscribe to:
Posts (Atom)